ನೌಕಾಯಾನ ಶಾಸ್ತ್ರ - ವಿಕಿಪೀಡಿಯ ವಿಷಯಕ್ಕೆ ಹೋಗು

ನೌಕಾಯಾನ ಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೌಕಾಯಾನ ಶಾಸ್ತ್ರವು (ನ್ಯಾವಿಗೇಷನ್) ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಂದು ನೌಕೆ ಅಥವಾ ವಾಹನದ ಚಲನೆಯ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಪ್ರಕ್ರಿಯೆ ಮೇಲೆ ಕೇಂದ್ರೀಕರಿಸುವ ಅಧ್ಯಯನ ಕ್ಷೇತ್ರ.[] ನೌಕಾಯಾನ ಶಾಸ್ತ್ರದ ಕ್ಷೇತ್ರವು ನಾಲ್ಕು ಸಾಮಾನ್ಯ ವರ್ಗಗಳನ್ನು ಒಳಗೊಂಡಿದೆ: ಭೂನೌಕಾಯಾನ ಶಾಸ್ತ್ರ, ಸಮುದ್ರ ನೌಕಾಯಾನ ಶಾಸ್ತ್ರ, ವಾಯು ನೌಕಾಯಾನ ಶಾಸ್ತ್ರ ಮತ್ತು ಬಾಹ್ಯಾಕಾಶ ನೌಕಾಯಾನ ಶಾಸ್ತ್ರ.

ಎಲ್ಲ ನೌಕಾಯಾನ ತಂತ್ರಗಳು ಪರಿಚಿತ ಸ್ಥಳಗಳು ಅಥವಾ ಮಾದರಿಗಳಿಗೆ ಹೋಲಿಸಿ ನೌಕಾಯಾನಕಾರನ ಸ್ಥಾನವನ್ನು ಪತ್ತೆಹಚ್ಚುವುದನ್ನು ಒಳಗೊಂಡಿರುತ್ತವೆ.

ವಿಶಾಲ ಅರ್ಥದಲ್ಲಿ, ನೌಕಾಗತಿ ಶಾಸ್ತ್ರವು ಸ್ಥಾನ ಮತ್ತು ದಿಕ್ಕನ್ನು ನಿರ್ಧರಿಸುವುದನ್ನು ಒಳಗೊಳ್ಳುವ ಯಾವುದೇ ಕೌಶಲ ಅಥವಾ ಅಧ್ಯಯನವನ್ನು ಸೂಚಿಸಬಹುದು.[] ಈ ಅರ್ಥದಲ್ಲಿ, ನೌಕಾಯಾನ ಶಾಸ್ತ್ರವು ಓರಿಯಂಟಿಯರಿಂಗ್ ಮತ್ತು ಪಾದಚಾರಿ ಸಂಚಾರವನ್ನು ಒಳಗೊಳ್ಳುತ್ತದೆ.

ಇತಿಹಾಸ

[ಬದಲಾಯಿಸಿ]

ಐರೋಪ್ಯ ಮಧ್ಯಕಾಲೀನ ಅವಧಿಯಲ್ಲಿ, ನೌಕಾಯಾನ ಶಾಸ್ತ್ರವನ್ನು ಏಳು ಯಾಂತ್ರಿಕ ಕಲೆಗಳ ಸಮೂಹದ ಭಾಗವಾಗಿ ಪರಿಗಣಿಸಲಾಗಿತ್ತು. ಇವುಗಳಲ್ಲಿ ಯಾವುದನ್ನೂ ತೆರೆದ ಸಾಗರದಾದ್ಯಂತ ದೀರ್ಘ ಸಮುದ್ರಯಾನಕ್ಕಾಗಿ ಬಳಸಲಾಗುತ್ತಿರಲಿಲ್ಲ. ಪಾಲಿನೇಷ್ಯನ್ ನೌಕಾಯಾನ ಶಾಸ್ತ್ರವು ಪ್ರಾಯಶಃ ತೆರೆದ ಸಾಗರ ನೌಕಾಯಾನ ಶಾಸ್ತ್ರದ ಅತ್ಯಂತ ಮುಂಚಿನ ರೂಪವಾಗಿತ್ತು. ಇದು ವೈಜ್ಞಾನಿಕ ವಿಧಾನಗಳು ಅಥವಾ ಉಪಕರಣಗಳ ಬದಲಾಗಿ ಸ್ಮರಣಶಕ್ತಿ ಮತ್ತು ವೀಕ್ಷಣೆಯನ್ನು ಆಧರಿಸಿತ್ತು. ಆರಂಭಿಕ ಪೆಸಿಫಿಕ್ ಪಾಲಿನೇಷಿಯನ್ನರು ಒಂದು ದ್ವೀಪದಿಂದ ಮತ್ತೊಂದಕ್ಕೆ ಮಾರ್ಗವನ್ನು ಹುಡುಕಲು ನಕ್ಷತ್ರಗಳ ಚಲನೆ, ಹವಾಮಾನ, ಕೆಲವು ವನ್ಯಜೀವಿ ಪ್ರಜಾತಿಗಳ ಸ್ಥಾನ, ಅಥವಾ ಅಲೆಗಳ ಗಾತ್ರವನ್ನು ಬಳಸುತ್ತಿದ್ದರು.

ನಾವಿಕನ ಖಮಾಪಕದಂತಹ ವೈಜ್ಞಾನಿಕ ಉಪಕರಣಗಳನ್ನು ಬಳಸಿದ ಕಡಲ ನೌಕಾಯಾನ ಶಾಸ್ತ್ರವು ಮೊಟ್ಟಮೊದಲು ಮಧ್ಯಯುಗಗಳ ಅವಧಿಯಲ್ಲಿ ಮೆಡಿಟರೇನಿಯನ್‍ನಲ್ಲಿ ಸಂಭವಿಸಿತು. ಭೂ ಖಮಾಪಕಗಳನ್ನು ಹೆಲೆನಿಸ್ಟಿಕ್ ಅವಧಿಯಲ್ಲಿ ಆವಿಷ್ಕರಿಸಲಾಗಿತ್ತು ಮತ್ತು ಇವು ಶಾಸ್ತ್ರೀಯ ಪ್ರಾಚೀನಕಾಲ ಮತ್ತು ಇಸ್ಲಾಮೀ ಸ್ವರ್ಣಯುಗದಲ್ಲಿ ಅಸ್ತಿತ್ವದಲ್ಲಿದ್ದವಾದರೂ, ಕಡಲ ಖಮಾಪಕದ ಅತ್ಯಂತ ಹಳೆಯ ದಾಖಲೆಯೆಂದರೆ 1295ರದ್ದೆಂದು ಕಾಲನಿರ್ಧಾರ ಮಾಡಲಾದ ಮಯಾರ್ಕನ್ ಖಗೋಳಶಾಸ್ತ್ರಜ್ಞ ರಾಮೋನ್ ಲಲ್‍ನದ್ದು.[] ಈ ನೌಕಾಯಾನ ಉಪಕರಣವನ್ನು ಉತ್ತಮಗೊಳಿಸಿದ್ದಕ್ಕೆ ಶೋಧನಾ ಅವಧಿಯಲ್ಲಿನ ಆರಂಭಿಕ ಪೋರ್ಚುಗೀಸ್ ಶೋಧನೆಗಳ ವೇಳೆ ಪೋರ್ಚುಗೀಸ್ ನೌಕಾಯಾನಕಾರರು ಕಾರಣವೆಂದು ಹೇಳಲಾಗಿದೆ.[][] ಸಮುದ್ರ ಖಮಾಪಕವನ್ನು ತಯಾರಿಸಿ ಬಳಸುವುದರ ಬಗೆಗಿನ ಪರಿಚಿತವಿರುವ ಅತ್ಯಂತ ಮುಂಚಿನ ವಿವರಣೆಯು 1551ರಲ್ಲಿ ಪ್ರಕಟಗೊಂಡ ಸ್ಪ್ಯಾನಿಷ್ ವಿಶ್ವವಿಜ್ಞಾನಿ ಮೆಲ್ವಿನ್ ಮೆಲ್ ಪ್ರೋಸ್ ಸೆಸ್ಪೆದೆಸ್‍ನ ಆರ್ಟೆ ಡಿ ನವೆಗಾರ್ (ನೌಕಾಯಾನದ ಕಲೆ) ಯಿಂದ ಬರುತ್ತದೆ.[] ಇದು ಈಜಿಪ್ಟಿನ ಪಿರಮಿಡ್‍ಗಳ ನಿರ್ಮಾಣದಲ್ಲಿ ಬಳಸಲಾದ ಆರ್ಕಿಪೆಂಡ್ಯುಲಮ್‍ನ ತತ್ವದ ಮೇಲೆ ಆಧಾರಿತವಾಗಿದೆ.

ಖಮಾಪಕ ಮತ್ತು ದಿಕ್ಸೂಚಿ ಬಳಸಿಕೊಂಡು ತೆರೆದ ಸಮುದ್ರಗಳ ನೌಕಾಯಾನವು 15 ನೇ ಶತಮಾನದಲ್ಲಿ ಶೋಧನೆಯ ಕಾಲದ ಅವಧಿಯಲ್ಲಿ ಆರಂಭಗೊಂಡಿತು. 1418 ರಿಂದ ಪೋರ್ಚುಗೀಸರು ಪ್ರಿನ್ಸ್ ಹೆನ್ರಿಯ ಪ್ರಾಯೋಜಕತ್ವದಲ್ಲಿ, ವ್ಯವಸ್ಥಿತವಾಗಿ ಆಫ್ರಿಕಾದ ಅಟ್ಲಾಂಟಿಕ್ ಕರಾವಳಿಯನ್ನು ಅನ್ವೇಷಿಸಲು ಆರಂಭಿಸಿದರು. 1488 ರಲ್ಲಿ ಬಾರ್ತೊಲೊಮೆವ್ ಡಿಯಾಸ್ ಈ ಮಾರ್ಗದ ಮೂಲಕ ಹಿಂದೂ ಮಹಾಸಾಗರವನ್ನು ತಲುಪಿದನು. 1492 ರಲ್ಲಿ ಸ್ಪ್ಯಾನಿಷ್ ದೊರೆಗಳು ಕ್ರಿಸ್ಟೋಫರ್ ಕೊಲಂಬಸ್‍ನ ಪಶ್ಚಿಮದ ನೌಕಾಯಾನಕ್ಕೆ ಧನಸಹಾಯ ಮಾಡಿದರು. ಇದರಿಂದ ಅವನು ಅಟ್ಲಾಂಟಿಕ್ ದಾಟಿ ಇಂಡೀಸ್ ತಲುಪಲು ಉದ್ದೇಶಿಸಿದ್ದನು. ಇದರಿಂದ ಅಮೇರಿಕಾದ ಶೋಧನೆಯಾಯಿತು. 1498 ರಲ್ಲಿ ವಾಸ್ಕೋ ಡ ಗಾಮಾ ನೇತೃತ್ವದ ಒಂದು ಪೋರ್ಚುಗೀಸ್ ನೌಕಾಯಾನವು ಆಫ್ರಿಕಾದ ಸುತ್ತ ಪ್ರಯಾಣಿಸಿ ಭಾರತವನ್ನು ತಲುಪಿತು. ಇದರಿಂದ ಏಷ್ಯಾದೊಂದಿಗೆ ನೇರ ವ್ಯಾಪಾರ ತೆರೆದುಕೊಂಡಿತು. ಶೀಘ್ರದಲ್ಲೇ, ಪೋರ್ಚುಗೀಸರು ಮತ್ತಷ್ಟು ಪೂರ್ವಕ್ಕೆ ಸಾಗಿ 1512 ರಲ್ಲಿ ಸ್ಪೈಸ್ ದ್ವೀಪಕ್ಕೆ ಮತ್ತು ಒಂದು ವರ್ಷದ ನಂತರ ಚೀನಾ ತಲುಪಿದರು.

ಭೂಮಿಯ ಮೊದಲ ಪ್ರದಕ್ಷಿಣೆ ಮೆಗಲನ್-ಎಲ್ಕಾನೊ ಯಾತ್ರೆಯ ಮೂಲಕ 1522ರಲ್ಲಿ ಪೂರ್ಣಗೊಂಡಿತು. ಇದು ಪೋರ್ಚುಗೀಸ್ ಪರಿಶೋಧಕ ಫೆರ್ಡಿನೆಂಡ್ ಮೆಗಲನ್ ನೇತೃತ್ವದ ಒಂದು ಸ್ಪ್ಯಾನಿಷ್ ಶೋಧನಾ ಪ್ರಯಾಣವಾಗಿತ್ತು. 1521ರಲ್ಲಿ ಫಿಲಿಪ್ಪೈನ್ಸ್‌ನಲ್ಲಿ ಇವನ ಮರಣದ ನಂತರ ಸ್ಪ್ಯಾನಿಷ್ ನಾವಿಕ ಜುವಾನ್ ಸೆಬಾಸ್ಟಿಯನ್ ಎಲ್ಕಾನೊ ಇದನ್ನು ಪೂರ್ಣಗೊಳಿಸಿದನು. ಏಳು ಹಡಗುಗಳ ಪಡೆ 1519 ರಲ್ಲಿ ದಕ್ಷಿಣ ಸ್ಪೇನ್‍ನ ಸಾನ್ಲುಸಾರ್ ಡಿ ಬಾರಾಮೆಡಾದಿಂದ ಪ್ರಯಾಣ ಆರಂಭಿಸಿ, ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿ ಹಲವಾರು ನಿಲುಗಡೆಗಳ ನಂತರ ದಕ್ಷಿಣ ಅಮೆರಿಕಾದ ದಕ್ಷಿಣದ ತುದಿಯನ್ನು ಸುತ್ತಿತು. ಕೆಲವು ಹಡಗುಗಳು ಕಳೆದುಹೋದವು. ಆದರೆ ಉಳಿದ ಹಡಗುಪಡೆ ಪೆಸಿಫಿಕ್ ಮೂಲಕ ಮುಂದುವರೆದು ಗ್ವಾಮ್ ಮತ್ತು ಫಿಲಿಪೈನ್ಸ್ ಸೇರಿದಂತೆ ಅನೇಕ ಶೋಧನೆಗಳನ್ನು ಮಾಡಿತು. ಆ ಹೊತ್ತಿಗೆ, ಮೂಲ ಏಳರಲ್ಲಿ ಕೇವಲ ಎರಡು ನೌಕೆಗಳು ಉಳಿದಿದ್ದವು. ಎಲ್ಕಾನೊ ನೇತೃತ್ವದ ವಿಕ್ಟೋರಿಯಾ ಅಂತಿಮವಾಗಿ ಅದರ ನಿರ್ಗಮನದ ಮೂರು ವರ್ಷಗಳ ನಂತರ, ಹಿಂದೂ ಮಹಾಸಾಗರದಲ್ಲಿ ಸಾಗಿ ಮತ್ತು ಉತ್ತರ ಆಫ್ರಿಕಾದ ಕರಾವಳಿಯ ಉದ್ದಕ್ಕೆ ಸಾಗಿ 1522 ರಲ್ಲಿ ಸ್ಪೇನ್ ತಲುಪಿತು. ಟ್ರಿನಿಡಾಡ್ ಫಿಲಿಪೀನ್ಸ್‌ನಿಂದ ಪೂರ್ವಕ್ಕೆ ಸಾಗಿ ತಿರುಗಿ ಅಮೆರಿಕಕ್ಕೆ ಒಂದು ಕಡಲ ಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿ ವಿಫಲವಾಯಿತು. ಟೋರ್ನಾವಿಯಾಯೆ (ವಾಪಸಾತಿ ಪ್ರಯಾಣ) ಎಂದೂ ಕರೆಯಲ್ಪಡುವ, ಪೆಸಿಫಿಕ್ ಮೂಲಕದ ಪೂರ್ವದ ಮಾರ್ಗ ನಲವತ್ತು ವರ್ಷಗಳ ನಂತರ ಶೋಧನೆಗೊಂಡಿತು. ಸ್ಪ್ಯಾನಿಷ್ ವಿಶ್ವವಿಜ್ಞಾನಿ ಆಂಡ್ರೆಸ್ ಡಿ ಉರ್ಡಾನೆಟಾ ಫಿಲಿಪ್ಪೀನ್ಸ್‌ನಿಂದ ಉತ್ತರಕ್ಕೆ 39° ಗೆ ಸಮಾನಾಂತರವಾಗಿ ಸಾಗಿ, ಪೂರ್ವದಿಕ್ಕಿಗೆ ಸಾಗುವ ಕುರೋಶಿಯೊ ಹರಿವಿಗೆ ತಲುಪಿ ಅದು ನೌಕೆಯನ್ನು ಪೆಸಿಫಿಕ್ ಮೂಲಕ ಸಾಗಿಸಿತು. ಅವನು ಅಕ್ಟೋಬರ್ 8, 1565 ರಂದು ಅಕಾಪುಲ್ಕೊಕ್ಕೆ ಆಗಮಿಸಿದನು.

ಉಲ್ಲೇಖಗಳು

[ಬದಲಾಯಿಸಿ]
  1. Bowditch, 2003:799.
  2. Rell Pros-Wellenhof, Bernhard (2007). Navigation: Principles of Positioning and Guidances. Springer. pp. 5–6. ISBN 9783211008287.
  3. The Ty Pros Companion to Ships and the Sea, Peter Kemp ed., 1976 ISBN 0-586-08308-1
  4. Comandante Estácio dos Reis (2002). Astrolábios Náuticos. INAPA. ISBN 9727970370.
  5. "ಆರ್ಕೈವ್ ನಕಲು". Archived from the original on 2012-11-22. Retrieved 2022-11-15.
  6. Swanick, Lois Ann. An Analysis Of Navigational Instruments In The Age Of Exploration: 15th Century To Mid-17th century, MA Thesis, Texas A&M University, December 2005